ಶುಕ್ರವಾರ, ಡಿಸೆಂಬರ್ 11, 2009

ವೇಶ್ಯಾವಾಟಿಕೆಗೆ ಅನುಮತಿ ಅಗತ್ಯ

ವೇಶ್ಯಾವಾಟಿಕೆ ಕುರಿತು ಸುಪ್ರೀಂ ಕೋರ್ಟ್ ಕೊನೆಗೂ ಕೇಂದ್ರ ಸರ್ಕಾರಕ್ಕೆ ಅರ್ಥಪೂರ್ಣ ಸಲಹೆ ನೀಡಿದೆ.ಅತ್ಯಂತ ಪುರಾತನ ವೃತ್ತಿಯಾದ ವೇಶ್ಯಾವಾಟಿಕೆಯನ್ನು ನಿಷೇಧ ಮಾಡಲು ಸಾಧ್ಯವಿಲ್ಲವಾದರೆ ಅದಕ್ಕೆ ಅನುಮತಿ ನೀಡುವ ಕುರಿತು ಪರಿಶೀಲನೆ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಇಂಥದೊಂದು ಪ್ರಗತಿಪರ ನಿಲುವು ತೆಗೆದುಕೊಂಡ ಸುಪ್ರೀಂ ಕೋರ್ಟ್ ನಿಜಕ್ಕೂ ಒಳ್ಳೆ ಹೆಜ್ಜೆ ಇರಿಸಿದೆ.ಥಾಯ್ಲಂಡ್ ನಂಥ ದೇಶದಲ್ಲಿ ವೇಶ್ಯಾವಾಟಿಕೆ ಅತ್ಯಂತ ಪವಿತ್ರವಾದ ವೃತ್ತಿಯಾಗಿದೆ.ಅಲ್ಲಿ ವೇಶ್ಯೆಯರನ್ನು ತುಂಬಾ ಗೌರವದಿಂದ ಕಾಣುತ್ತಾರೆ.ವೇಶ್ಯಾವಾಟಿಕೆ ಅಲ್ಲಿನ ಪ್ರವಾಸೋದ್ಯಮದ ಅತಿ ಹೆಚ್ಚಿನ ಆದಾಯ ಮೂಲವಾಗಿದೆ.ಆದರೆ ಭಾರತದ ಪರಿಸ್ಥಿತಿಯೇ ಬೇರೆಯಾಗಿದೆ. ಇಲ್ಲಿ ಖದೀಮರು,ಭ್ರಷ್ಟರು,ಮುಖಹೀನ ರಾಜಕಾರಣಿಗಳು,ಅಡ್ಡ ದಾರಿ ಹಿಡಿದು ಸಂಪತ್ತು ಸಂಗ್ರಹಿಸಿದವರು ಭಯ ಮಿಶ್ರಿತ ಗೌರವ ಸಂಪಾದಿಸುತ್ತಾರೆ.ಕೇವಲ ಹೊಟ್ಟೆ ಪಾಡಿಗಾಗಿ ಮೈ ಮಾರಿಕೊಳ್ಳುವವರನ್ನು ತುಂಬಾ ನಿಕೃಷ್ಟವಾಗಿ ಕಾಣಲಾಗುತ್ತಿದೆ.ಪ್ರತಿ ದಿನ ಭಯ,ಅಸಹಾಯಕತೆ,ಹಸಿವು,ಸಂಕಟಗಳಲ್ಲೇ ಬದುಕು ಸಾಗಿಸುವ ದೇಶದ ಅದೆಷ್ಟೋ ವೇಶ್ಯೆಯರು ಭವಿಷ್ಯವಿಲ್ಲದೆ ನಲುಗಿಹೋಗಿದ್ದಾರೆ. ವೇಶ್ಯಾವಾಟಿಕೆಯನ್ನು ಈವರೆಗೆ ಸಂಪೂರ್ಣವಾಗಿ ನಿಷೇಧಿಸಲು ಸಾಧ್ಯವಾಗಿಲ್ಲ,ಅದು ಸಾಧ್ಯವೂ ಅಲ್ಲ,ಸಾಧುವೂ ಅಲ್ಲ.ನಿಷೇಧ ಸಾಧ್ಯವಿಲ್ಲದ ಕಾರಣದಿಂದಲೇ ಇವೊತ್ತಿಗೂ ಪೊಲೀಸರು ಹೊಟ್ಟೆ ಪಾಡಿಗಾಗಿ ವೇಶ್ಯಾವಾಟಿಕೆ ಮಾಡಿದವರನ್ನು ಬಂಧಿಸಿ ಏನೋ ಸಾಹಸ ಮಾಡಿದಂತೆ ಪ್ರತಿ ದಿನ ಬೀಗುತ್ತಿದ್ದಾರೆ,ಟಿವಿ ವಾಹಿನಿಗಳಲ್ಲಿ ಅಂಥವರ ಬೇಟೆಯ ಕುರಿತು ಪೋಲೀಸರ ಮಹಾನ್ ಸಾಹಸಗಾಥೆಗಳು ನಿರಂತರವಾಗಿ ಪ್ರಸಾರವಾಗುತ್ತಿವೆ.ಆದರೆ ವೇಶ್ಯಾವಾಟಿಕೆಯಲ್ಲಿ ಭಾಗಿಯಾದ ಪುರುಷರ ಬೇಟೆ ಮಾಡಿದ ಪ್ರಸಂಗಗಳು ಈವರಗೆ ವರದಿಯಾಗಿಲ್ಲ.ತಲೆ ಹಿಡುಕರು,ಪೊಲೀಸರು,ಲೈಂಗಿಕ ರೋಗ ಹೊತ್ತ ಪುರುಷರ ಹಿಂಸೆಯಿಂದ ತನ್ನನ್ನೇ ಕಳೆದುಕೊಳ್ಳುವ ಹ್ಲಾದಿನಿಯರು ಇಂದು ನರಕಸದೃಶ ಬದುಕಿನಲ್ಲಿ ನರಳುತ್ತಿದ್ದಾರೆ.
ವೇಶ್ಯಾವಾಟಿಕೆಗೆ ಅನುಮತಿ ನೀಡಲು ಸರ್ಕಾರ ಕ್ರಮ ಕೈಗೊಂಡರೆ ಅದರಿಂದ ಅನೇಕ ಸಕಾರಾತ್ಮಕ ಪರಿನಾಮಗಳಾಗಲಿವೆ.ಬಹು ಮುಖ್ಯ ಬದಲಾವಣೆ ಎಂದರೆ ಪ್ರತಿ ದಿನ ನಡೆಯುತ್ತಿರುವ ಅತ್ಯಾಚಾರ ಅದರಲ್ಲೂ ಶಿಶು ಅತ್ಯಾಚಾರ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಲಿದೆ.ಅಷ್ಟೇ ಅಲ್ಲ.ವೇಶ್ಯಾವಾಟಿಕೆಯಲ್ಲಿ ತೊಡಗುವವರಿಗೆ ಕಾನೂನಿನ ರಕ್ಷಣೆ ಇರುತ್ತದೆ.ಅಂದರೆ ಪೊಲೀಸರು,ದಲ್ಲಾಳಿಗಳು,ಗಿರಾಕಿಗಳ ಹಿಂಸೆಯಿಂದ ಇವರು ಪಾರಾಗಬಹುದು.ಜೊತೆಗೆ ಯಾರ ಭಯವೂ ಇಲ್ಲದೆ ತಲೆ ಎತ್ತಿ ಸ್ವಾಭಿಮಾನದಿಂದ ಬದುಕಬಹುದು.ನಿರಂತರ ವೈದ್ಯಕೀಯ ತಪಾಸಣೆಯಿಂದ ತನ್ನ ಆರೋಗ್ಯದ ಜತೆ ಗಿರಾಕಿಗಳ ಆರೋಗ್ಯವನ್ನೂ ಕಾಪಾಡಬಹುದು.
ಇದನ್ನು ವಿರೋಧಿಸುವವರು ಸಭ್ಯತೆಯ ಮುಖವಾಡ ತೊಟ್ಟಿರುತ್ತಾರೆಯೇ ಹೊರತು ಅವರಿಗೆ ಇಂಥ ಮಹಿಳೆಯರ ಬಗ್ಗೆ ಯಾವುದೇ ಪ್ರಾಮಾಣಿಕ ಕಾಳಜಿ ಇರುವುದಿಲ್ಲ.
ಮೈಥುನ ಅನ್ನುವುದು ಗಾಳಿ,ಆಹಾರ,ನಿದ್ದೆಯಷ್ಟೇ ಬದುಕಿನ ಅನಿವಾರ್ಯ ಆಗಿರುವುದರಿಂದ ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸುವುದು ಹೆಚ್ಚು ಸೂಕ್ತ.ಅದರಿಂದ
 ಲೈಂಗಿಕ ಕಾರ್ಯಕರ್ತೆಯರಿಗೆ ಭದ್ರತೆಯೂ ದೊರೆಯುತ್ತದೆ.
ಕೊನೆ ಹನಿ :ಮುಂಬೈನ ಕಾಮಶಾಸ್ತ್ರಜ್ನರೊಬ್ಬರು,ಲೈಂಗಿಕ ಸಮಾವೇಶವೊಂದರಲ್ಲಿ "ಜಗತ್ತಿನ ಶೇಕಡಾ ೯೦ರಷ್ಟು ಜನರು ಮುಷ್ಠಿ ಮೈಥುನ ಮಾಡುತ್ತಾರೆ,ಉಳಿದ ಶೇಕಡಾ ೧೦ರಷ್ಟು ಜನರು ಮುಷ್ಠಿ ಮೈಥುನ ಮಾಡುವುದಿಲ್ಲವೆಂದು ಸುಳ್ಳು ಹೇಳುತ್ತಾರೆ"ಎಂದು ಹೇಳಿದ್ದರು.

1 ಕಾಮೆಂಟ್‌:

  1. ondu drustiyalli nimma vada sari. adre, hige ye ella ritiya piduga galigella anumati needuta hodre, matka, jooju, andar bahar ityadi galigella anumati kodi endu kela bahududeno. badalada paristi alli hotte horeyalu devadasi paddathi gu anumati needi endu kelidare? mahanthesh.g.

    ಪ್ರತ್ಯುತ್ತರಅಳಿಸಿ

Powered By Blogger

ಬೆಂಬಲಿಗರು

renukacharya avarannu mantri maadiddu sariye?