ಶನಿವಾರ, ಡಿಸೆಂಬರ್ 5, 2009

ಒಂದು ಕಟ್ಟಡದ ಸುತ್ತ

ರಾತ್ರಿ ಮಲಗುವ ಹೊತ್ತು
ಪುಟ್ಟ 'ಗುಡಿ'ಸಲಲಿದ್ದ
 ಪುಟಾಣಿ ಸಬೀಹಾಳಿಂದ
ಅಪ್ಪ ಮೊಹ್ಮದನಿಗೆ ಪ್ರಶ್ನೆ
"ಅಬ್ಬಾಜಾನ್,ದೇವರೆಂದರೆ ಯಾರು?"
"ಸುಂದರ ಹೃದಯ ಇರುವವರೆಲ್ಲ
ದೇವರೇ ಮಗು,
ಅಂಥ  ಹೃದಯಗಳೇ ದೇವಾಲಯ"
"ಅದಲ್ಲ ಅಬ್ಬಾಜಾನ್,
ನಿಜವಾದ ದೇವರು ಎಲ್ಲಿದ್ದಾನೆ?"
"ಆತ ನಿನ್ನೊಳಗೆ,ನನ್ನೊಳಗೆ
ಎಲ್ಲ ಸುಂದರ ಹೃದಯಗಳೊಳಗೆ
ಇಲ್ಲಿ,ಅಲ್ಲಿ ಎನ್ನದೆ
ಎಲ್ಲೆಲ್ಲೂ ಇರುತ್ತಾನೆ ಮಗು"
"ಆತ ಇಂತಲ್ಲೇ ಹುಟ್ಟಿದ
ಗುಡಿ ಗುಂಡಾರ ಬೇಕು ಅಂತಾರೆ?"
ಮತ್ತೆ ಸಬೀಹಾಳ ಪ್ರಶ್ನೆ
"ದೇವರಿಗೆ ಹುಟ್ಟೂ,ಸಾವೂ,
ಆಕಾರ ಯಾವುದೂ ಇಲ್ಲ ಮಗು"
"ಮತ್ತೇಕೆ ಅಬ್ಬಾಜಾನ್ ದೇವರಿಗೆ
ಕಟ್ಟಡ  ಕಟ್ಟುವ ಕೆಲಸ?
ಜೈಲಿನ ಹಾಗೆ?
"ಹೃದಯ ಬೀಗದ ಕೀಲಿ ಕಳಕೊಂಡವರೆಲ್ಲ
ಈ ದೇವರನ್ನೂ ಬಂಧಿಸಿಡುವ
ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ ಮಗು
ಇದೆಲ್ಲ ನಿನಗೆ ಬೇಡ ಮಲಕ್ಕೋ"
ಹೊತ್ತು ಕಳೆದಂತೆ ಸಬೀಹಾಳಿಗೆ ನಿದ್ದೆ
"ದಾಡಿವಾಲಾನೊಬ್ಬ
ವಿಷದ ಹಾವು ಸುತ್ತಿಕೊಂಡವನಿಗೆ
ರಕ್ತ ಕೊಟ್ಟಿದ್ದು,
ಮುಸುಕುಧಾರಿಯೊಬ್ಬಳನ್ನು
 ಕರಿಯನೊಬ್ಬ ಅಪ್ಪಿಕೊಂಡದ್ದು
ರಫೀಕ್,ರಮಾ ಓಡಿಹೋದದ್ದು
ಚರಂಡಿಯಲ್ಲಿ ಅವರಿಬ್ಬರ ಹೆಣ ಸಿಕ್ಕಿದ್ದು "
ಮೂರು ಕೊಂಬಿನ ರಾಕ್ಷಸ
ಕೂಗಿಕೊಂಡಿದ್ದು
ಹೀಗೆ ಚಿತ್ರ ವಿಚಿತ್ರ ಕನಸುಗಳು
ಯಾವುದೋ ಕೂಗು
ಘೋಷಣೆಗಳ ಅರಚಾಟ
ಕನಸಿನ ಲೋಕಕ್ಕೆ
ಕತ್ತರಿ ಬಿದ್ದ ಹಾಗೆ
ಎಚ್ಚರಾದ ಸಬೀಹಾಳಿಗೆ
ತನ್ನ ಪುಟ್ಟ ಗುಡಿಸಲನ್ನು
ಬೆಂಕಿ ನುಂಗುತ್ತಿರುವುದು
ಕಂಡಾಗ
ಅಸಹಾಯಕ ಕೂಗು.
ಮತ್ತೆ ಸ್ವಲ್ಪ ಹೊತ್ತಿಗೆ
ಸ್ಮಶಾನ ಮೌನ
ಈಗ ಅಲ್ಲಿ
ಸಬೀಹಾ ಇಲ್ಲ
ಮೊಹ್ಮದ ಇಲ್ಲ
ಪುಟ್ಟ ಗುಡಿಸಲೂ ಇಲ್ಲ
'ಹೇ ರಾಮ್ ' ಎನ್ನಲು
ಗಾಂಧಿಯೂ ಇಲ್ಲ .
ಎಲ್ಲ ಕಟ್ಟಡಕ್ಕಾಗಿ
Only for building
And not Temple
"ಬೋಲೋ ಭಾರತ್ ಮಾತಾಕಿ ಜೈ!"
"ಹಿಂದೂಸ್ಥಾನ್ ಹಮಾರ ಹೈ"
(ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆಂದು ಸಂಘ
ಪರಿವಾರದ ಮಹಾನುಭಾವರು ಬಾಬ್ರಿ ಮಸೀದಿಯನ್ನು ಕೆಡವಿ
ಡಿಸೆಂಬರ್ ೬ಕ್ಕೆ ೧೭ ವರ್ಷ ತುಂಬುತ್ತಿದೆ.ಈ ದುರ್ಘಟನೆಯ
ನೆನಪಿಗೆ)

1 ಕಾಮೆಂಟ್‌:

  1. nimma padya oddida mele b.peerbasha mathu allamaprabhu bettaduru avra padyada salu nenapaiytu. adu.. rama neenu maravagidare estu chenna. hageye bettaduru avra avru keduvaballaru... navu katta ballahevu...
    anda hage librahan commission report bagge nimma barahakagie eduru nodutidane. dinesh amen mattu prajavani alli barediddare. mahanthesh.g.

    ಪ್ರತ್ಯುತ್ತರಅಳಿಸಿ

Powered By Blogger

ಬೆಂಬಲಿಗರು

renukacharya avarannu mantri maadiddu sariye?